ಹುಟ್ಟು ದಿನದ ಶುಭಾಶಯಗಳು

Posted: February 8, 2011 in ಹೊಸತುಇಂದು ನನ್ನ ಹುಟ್ಟಿದ ದಿನ. ನಾನು ನನ್ದ ಹುಟ್ಟಿದ ದಿನ ತುಂಬಾ ಸಂತೋಷವಾಗಿರಬೇಕಾದ ದಿನ. ಆದರೆ ಈ ದಿನ ನನಗೆ ಸಾಕಷ್ಟು ಮಾನಸಿಕ ಉದ್ವೇಗ ಕೋಪಾ. ನಾನು ನನ್ನ ಹುಟ್ಟಿದ ದಿನವನ್ನು ಯಾವತ್ತೂ ಆಚರಿಸಿದವನಲ್ಲ. ಆದರೆ ಇತ್ತೀಚೆಗೆ ಸಾಕಷ್ಟು ಸುಧಾರಣೆ ತಂದುಕೋಂಡರೂ ಸಮಾಧಾನ ಮಾಡಿಕೊಂಡರೂ ಏಕೋ ನಿಲ್ಲದ ಉದ್ವೇಗ ಅಶಾಂತಿ. ಅದಕ್ಕೆ ನಾನು ಕಂಡುಕೊಂಡ ಕೆಲ ಕಾರಣಗಳನ್ನು ಹೀಗೆ ಸಮರ್ಥಿಸುತ್ತೇನೆ.
ದಿನ ಕಳೆದಂತೆ ನನಗೆ ಹೊಸ ಹೊಸ ಗೆಳೆಯರ ಪರಿಚಯ, ಹೊಸ ಜನರ ಒಡನಾಟ, ಎಲ್ಲವೂ ಸ್ವೀಕರಿಸುತ್ತಾ ಹೋಗುವುದು ಅನಿವಾರ್ಯ. ಆದರೆ ಇವು ಹೆಚ್ಚಾದಂತೆ ಮನಸ್ಸಿಗೆ ಏನೋ ಕಳೆದುಕೊಂಡಂತಹ ಭಾವ. ನಿರಾಸೆ ಅತೃಪ್ತತೆ.

ನೆನ್ನೆ ರಾತ್ರಿಯಿಂದ ನನಗೆ ಹುಟ್ಟು ದಿನದ ಶುಭಾಶಯಗಳು ಬರ ತೊಡಗಿದವು. ಅದರಲ್ಲಿ ಬೆಳಗ್ಗೆ ನನಗೆ ಬಂದ ಶುಭಾಶಯಗಳಲ್ಲಿ ಕೆಲವು ಇಲ್ಲಿವೆ. ನಮ್ಮ ಕಂಪನಿಯ ಎಚ್ ಆರ್ ನಿಂದ ಮೊದಲು, ನಂತರ 160/2, ಎಲ್ ಐ ಸಿ, ಎಸ್ ಬಿ. ಐ ಇವು ಮೊಬೈಲಿಗೆ ಬಂದವು. ಇನ್ನೂ ಕೆಲವು ಮೇಲ್ ಅಥವಾ ಪೇಸ್ ಬುಕ್ ಕೆಲವು ಹೀಗೆ ಸಾಕಷ್ಟು ಬಂದವು. ನನ್ನ ಹುಟ್ಟು ದಿನದಂದು ಬಂದ ಶುಭಾಶಯಗಳು ಖುಷಿ ಕೊಡುವ ವಿಚಾರವೇ ಆದರೆ ನನಗೆ ಬೇಸರ ತಂದಿದ್ದು ಮಾತ್ರ. ನಾವು ಹೇಳಿಕೊಟ್ಟ ಮಿಷನ್ಗಳು ನಾನು ಬುದ್ದಿ ಹೇಳಿದ ಪ್ರೋಗ್ರಾಂಗಳು, ನಾವು ಮಾಡಿಕೊಂಡ ರಿಜಿಸ್ಟಡ್ ಸೈಟುಗಳು, ಅನೇಕ ಸೋಸಿಯಲ್ ನೆಟ್ವ ರ್ಕಗಳು ನಮಗೆ, ನಿಗಧಿತ ದಿನದಂದು ನಿಗಧಿಯಾದ ಸಮಯಕ್ಕೆ ಸರಿಯಾಗಿ ಶುಭಾಶಯಗಳನ್ನು ಹೇಳುತ್ತವೆ. ನಾನು ಅತೀಯಾಗಿ ಪ್ರೀತಿಸುವ ನಾನು ಖುದ್ದಾಗಿ ಸಂಬಂಧಗಳನ್ನ ಮಾಡಿಕೊಂಡ, ಅದಾಗಿಯೇ ಆದ ಸಂಬಂಧಗಳು ಮಾತ್ರ ಮರೆಯುತ್ತಿವೆ. ಮಾನವನ ಜೀವನ ಯಾಂತ್ರಿಕವಾಗಿಬಿಟ್ಟಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದಕ್ಕಿಂತ ಯಂತ್ರಗಳನ್ನು ಪ್ರೀತಿಸುತ್ತಿದ್ದಾರೆ. ಪ್ರೀತಿಸುವುದು ಅನಿವಾರ್ಯವಾದರೆ ಯಂತ್ರದ ಮೂಲಕವೇ ಪ್ರೀತಿಸಬೇಕು ಅನ್ಯತವಿಲ್ಲ. ಭಾವನೆಗಳಿಗೆ ಧಕ್ಕೆ ಬಂದಿದೆ ಪ್ರೀತಿಯ ಭಾವನೆಗಳಿಗೆ ಅಂತ್ಯ ಕಾಲ ಸಂದಿದೆ. ಇದನ್ನು ಓದಿದಾಗ ನಿಮಗೆ ಮಾನಸಿಕ ಉದ್ವೇಗದಿಂದ ಈ ಮಾತುಗಳು ಬರುತ್ತಿವೆ ಎನಿಸಬಹುದು ಆದರೆ ಇದು ನನ್ನ ಅನುಭವ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s