ಬೇಲೂರು ಹಳೇಬೀಡು ಎಂಬ ರಸಶಿಲ್ಪಗಳು. . .

Posted: February 3, 2011 in ಹೊಸತು

.

This slideshow requires JavaScript.

ತುಂಬಾ ದಿನದ ನಂತರ ನಾನು ಇತ್ತೀಚೆಗೆ ಬೇಲೂರು ಹಳೇಬೀಡಿಗೆ ಹೋಗಿದ್ದೆ. ಹಾಸನದಿಂದ ಸುಮಾರು 22 ಅಥವಾ 25 ಕಿಲೋ ಮೀಟರ್ ಇರಬಹುದು. ಮೊದಲು ದಾರಿ ತಪ್ಪಿ ನಾವು ಹಳೇಬೀಡಿಗೆ ಹೋಗಿದ್ದೆ. ಅಲ್ಲಿ ಒಳಗೆ ಹೋಗುತ್ತಿದ್ದಂತೆ ಒಂದು ರೀತಿಯ ಕುತೂಹಲ. ಕಾರಣ ಬೇಲೂರು ಹಳೇಬೀಡು ಎಂದರೆ ಈಗಾಗಲೇ ಕೇಳಿ ಕಂಡಿರುವ ಊರು. ಈ ಊರುಗಳ ಬಗ್ಗೆ ಅನೇಕರು ಅನೇಕ ಮಾತುಗಳನ್ನಾಡಿದ್ದಾರೆ. ಆದರೆ ಅವರ ಮಾತುಗಳಿಂದ ಪ್ರಭಾವಿತರಾದ ನಾವು ಅದನ್ನೇ ಹುಡುಕುವುದು ಸಹಜ. ಮೊದಲು ಹಳೇಬೀಡಿಗೆ ಹೋಗಿ ಅಲ್ಲಿ ಶಿವನ ದೇವಾಲಯ ಕಂಡೆವು. ಅದು ನಿಜಕ್ಕೂ ಚೆನ್ನಾಗಿದೆ. ಯಾವುದೇ ಹೆಚ್ಚಿನ ನಿರಾಸ ಕಾಡಲಿಲ್ಲ. ಒಂದೊಂದು ಕಲ್ಲುಗಳೂ ಒಂದೊಂದು ಕಥೆ ಹೇಳುತ್ತಿತ್ತು. ಇತಿಹಾಸ ಪುರಾಣ ಐತಿಹ್ಯ. ಹೀಗೆ ಹಲವು. ರಸಗಳು ಸಹ ಒಂಭತ್ತು ರಸಗಳು ಅಲ್ಲಿ ಮೇಳೈಸಿವೆ, ಹುಡುಕಬೇಕಷ್ಟೇ. ಸೂಕ್ಷ್ಮ ಕೆತ್ತನೆಗಳು ಕುಸುರಿ ಕಲೆ, ಕಸೂತಿ ಏನಿಲ್ಲಾ? ಎಲ್ಲಾ ಇವೆ. ನೋಡುವ ಕಣ್ಣು ಬೇಕು. ತುಂಬಾ ಹುತ್ಸುಕನಾಗಿ ಮುಂದೆ, ಬೇಲೂರಿಗೆ ಹೊರಟೆ.

ಬೇಲೂರಿನಲ್ಲಿ ಚೆನ್ನಕೇಶವನ ದೇವಸ್ಥಾನದ ಪ್ರಾಂಗಣ ವಿಶಾಲವಾಗಿದೆ. ಅದರ ಹಜಾರವೇ ವಿಶಾಲ. ದೇವಸ್ಥಾನ ಅದರ ಕೆತ್ತನೆ, ಕಲಾ ಸೌಧ ಎಲ್ಲವೂ ಸುಂದರ. ಅದೇಕೋ ಕಾಣೆ ಹಳೇಬೀಡಿನ ರೀತಿ ಈ ದೇವಸ್ಥಾನ ಮನಸ್ಸಿಗೆ ಖುಷಿ ನೀಡಲಿಲ್ಲಿ. ಅಲ್ಲಿರುವಂತೆಯೇ ಇಲ್ಲಿಯೂ ಕೆತ್ತನೆಯ ಕರ್ಮವನ್ನೇ ಮಾಡಿದ್ದರೂ ಮನಸ್ಸಿಗೆ ಏನೋ ಅತೃಪ್ತಿ.

Advertisements
Comments
  1. venkoba says:

    nanu kannadiganagi janisiddake hemme paduttene

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s