ನಿಮಗೆಲ್ಲರಿಗೂ ನಮಸ್ಕಾರ, ನೀವೆಲ್ಲಾ ಟಿವಿಯಲ್ಲಿ ಬರುತ್ತಿರುವ ಅನೇಕ ಅವಾಡರ್್ ಫಕ್ಷನ್ ನೋಡಿರಬಹುದು. ಅವುಗಳನ್ನು ನೋಡಿದಾಗ ನಮಗೆ ಅಲ್ಲಿ ಬರುವ ಹಾಡುಗಳು ನಮ್ಮನ್ನು ಎಲ್ಲಿಗೋ ಕರೆದೊಯ್ಯತ್ತವೆ. ಅಲ್ಲಿ ನಮ್ಮವರಿಗೆ ನಾವು ಮೆಚ್ಚಿದ ಗಾಯಕರಿಗೆ, ನಟರಿಗೆ ಹೀಗೆ ಒಟ್ಟಾರೆಯಾಗಿ ನಮ್ಮ ಮನದಲ್ಲಿ ಸ್ಥಾಪನೆಯಾಗಿ ನೆಲೆಯೂರಿರುವ ಅನೇಕ ಮೂತರ್ಿಗಿಗೆ ಅವಾರ್ಡ ಅಥವಾ ಬಹುಮಾನ ಅಥವಾ ಸನ್ಮಾನ ಬಂದರೆ ನಮಗೆ ಬಂದಂತೆ ಬಾಸವಾಗುತ್ತದೆ. ಅದು ಒಬ್ಬ ಕಲಾರಸಿಕೆ ಕಲಾರಸಿಕನಿಗೆ ಇರಬಹುದಾದ ಗುಣ.
ನಾನು ಈ ಹಿಂದೆ ನೋಡಿದ ಇತ್ತೀಚಿನ ಮೇಲೆ ಹೇಳಿದಂತಹ ಅನೇಕ ಕಾರ್ಯಕ್ರಮಗಳು ನೋಡಿದಾಗ ನನ್ನ ಗಮನಕ್ಕೆ ಬಂದ ಒಂದು ಪೆದ್ದು ವಿಚಾರ ಇದಾಗಿದೆ. ಹಿಂದೆ ನಡೆದ ಕಾರ್ಯಕ್ರಮಗಳ ಬಗ್ಗೆ ಅಷ್ಟು ಸ್ಪಷ್ಟವಾಗಿದೆ ಆದ್ದರಿಂದ ಮಿಚರ್ಿಅವಾರ್ಡ 2010 ಸುವರ್ಣ ಚಾನಲ್ ನಲ್ಲಿ ನೋಡಿದಾಗ ಅಲ್ಲಿ ಕಂಡದ್ದು ಇದು. ಅಕಾರ್ಯಕ್ರಮದ ಹಿಂದೆ ಕನ್ನಡಿಗರು ಇದ್ದರು. ತೆರೆಯ ಮುಂದೆ ಬಂದವರು ಮಲಯಾಳಿಗಳು. ಹಾಡಿಕುಣಿದವರೂ ಅವರೇ. ಇಷ್ಟೆಲ್ಲಾ ಹೋಗಲಿ ಸುವರ್ಣ ಚಾನಲ್ನ ಪ್ರತಿಸ್ಪಧರ್ಿಗಳಲ್ಲಿ ಒಂದಾದ ಈಟಿವಿ ನಿಮರ್ಾಣದ ಚಿತ್ರ ಸವಾರಿ. ನಿಜವಾಗಿಯೂ ಆ ಸಿನೆಮಾ ಚೆನ್ನಾಗಿದೆ ಅಲ್ಲಿನ ಹಾಡುಗಳು ಚೆನ್ನಾಗಿದೆ ಆದರೆ ಅಲ್ಲಿ ಅವಾರ್ಡ ಸಿಕ್ಕಿದ್ದು ಅಷ್ಟೇ ಏಕೆ ಬೇರೆ ಬೇರೆ ಚಿತ್ರಗಳಲ್ಲಿ ಎಲ್ಲಿ ಎಲ್ಲಿ ಮಲಯಾಳಿಗಳು ಇದ್ದಾರೋ ಅವರನ್ನು ಹುಡುಕಿ ಕೊಟ್ಟರು, ಇನ್ನೇನು ಯಾರು ಇಲ್ಲದೇ ಅವಿವಾರ್ಯವಾದ ಸ್ಥಿತಿಯಲ್ಲಿ ಮಾತ್ರ ಕನ್ನಡಿಗರಿಗೆ. ದಯವಿಟ್ಟು ಗಮನಿಸಿ ಕನ್ನಡಿಗರು ಎಲ್ಲಿದ್ದಾರೆ ಹುಡುಕಿ. ಸುವರ್ಣ ಚಾನಲ್ ಮಲಯಾಳಿಗಳ ಚಾನಲ್ನಲ್ಲಿ ಅವರದಲ್ಲದೇ ಮತ್ತಾರದು ನನಗೆ ಅಷ್ಟೂ ತಿಳಿಯಲಿಲ್ಲ. ಇನ್ನೂ ಕನ್ನಡಿಗರ ಚಾನಲ್ ಎಂದೇ ಕರೆಸಿಕೊಳ್ಳುವ ಚಾನಲ್ ಈಟಿವಿ ಕನ್ನಡ ಇದೂ ತೆಲುಗಿನವರದು, ಉದಯ ಟಿವಿ ಬಂದು ತಮಿಳರದ್ದು, ಕನ್ನಡಿಗರ ಏಕೈಕ ಚಾನಲ್ ಕಸ್ತೂರಿ ಕನ್ನಡ ಇದು ಗೌಡರದ್ದು, ದೂರದರ್ಶನ ಎಲ್ಲರಿಗೂ ದೂರದಿಂದಲೇ ದರ್ಶನ. ಇನ್ನು ನಮ್ಮಂತ ಕನ್ನಡಿಗರು ಅವರು ಏನು ಹಾಕುತ್ತಾರೋ ಅದನ್ನು ಹೆಮ್ಮೆಯಿಂದ ನೋಡಿ ಆನಂದಿಸುತೇವೆ. ಅದೇ ಚಾನಲ್ನಲ್ಲಿ ನಮ್ಮವರಿಗೆ ಹೊಡೆದ ಸ್ಟೋರಿ ತೋರಿಸುತ್ತಾರೆ ಅದನ್ನು ನಮ್ಮವರೇ ಓದುತ್ತಾರೆ. ನಮ್ಮವರೇ ನೋಡುತ್ತಾರೆ. ನಮ್ಮ ಕಥೆಯನ್ನು ನಮಗೆ ಮಾರಿ ಹಣ ಮಾಡುವವರು ಇವರು.