ಕಲ್ಯಾಣ ಪಟ್ಟಣದ ಸಾಲು

Posted: September 3, 2009 in ಹೊಸತು

ನಾವು ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆ 4 ಗಂಟೆಗೆ ಹೈದರಾಬಾದಿನಿಂದ ಬಸವಕಲ್ಯಾಣದ ಕಡೆಗೆ ಹೊರೆಟೆವು. ನೇರವಾಗಿ ನಮಗೆ ಬಸ್ಸು ಬಸವಕಲ್ಯಾಣಕ್ಕೆ ಬಸ್ಸಿಲ್ಲದೆ ಹುಮನಬಾದ್ಗೆ ಹೋಗಿ ಅಲ್ಲಿಂದ ಬಸವಕಲ್ಯಾಣಕ್ಕೆ ಹೋದೆವು. ಅಲ್ಲಿ ಬಸ್ಸು ಇಳಿಯುತ್ತಿದ್ದಂತೆ ತಿಂಡಿಯ ನೆನಪಾಗಿ ಅಂಬೇಡ್ಕರ್ ಸರ್ಕಲ್ನಲ್ಲಿನ ಒಂದು ಹೋಟೆಲ್ನಲ್ಲಿ ಶಿರಾ ಉಪಮಾ (ಚೌಚೌಬಾತ್) ಮುಗಿಸಿದೆವು. ಎಲ್ಲಿಗೆ ಮೊದಲು ಹೋಗಬೇಕೆಂದು ತಿಳಿಯದೆ ಅಲ್ಲೇ ವಿಚಾರಿಸಿದಾ ನಾವಿದ್ದಲ್ಲಿಗೆ ಅಲ್ಲಮಪ್ರಭುದೇವರ ಗದ್ದುಗೆಗೆ ದಾರಿ ತೋರಿಸಿದರು. ಅವರು ಹೇಳಿದ ದಾರಿಯಲ್ಲಿ ಹೊರೆಟೆವು. ನಾವು ಹೋದ ದಾರಿಯಲ್ಲಿ ಮೊದಲು ಎದುರಾಗಿದ್ದು ಸಕರ್ಾರಿ ಆಸ್ಪತ್ರೆ. ಹಂದಿಜ್ವರದ ಭಯದಿಂದಲೇ ಆಸ್ಪತ್ರೆಯ ಹಿಂದಿನ ದಾರಿಯಲ್ಲಿ ಹೊರೆಟೆವು. ಹಿಂದೆ ಬಿದ್ದಿದ್ದ ಕಸದ ರಾಶಿ ಆಸ್ಪತ್ರೆಯ ಸ್ಥಿತಿ ಹೇಳುತ್ತಿತ್ತು. ನಿಮ್ಮನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮನಿಮ್ಮ ತನುವ ಸಂತೈಸಿಕೊಳ್ಳಿ ಎಂದು ಮುಂದೆ ಸಾಗಿದೆವು. ಅಲ್ಲಿಗೆ ನಮಗೆ ಎದುರಾಗಿದ್ದು ಪ್ರಭುದೇವರ ಗದ್ದುಗೆ. ನಮಗೆ ಅಲ್ಲಿನ ವಿಷೇಶವೇನೆಂದು ಹೇಳುವವರು ಯಾರು ಇರಲಿಲ್ಲ. ಆದರೂ ಗದ್ದುಗೆ ಎಂದರೆ ಅಲ್ಲಮರ ಕಾಲವಾದ ಸ್ಥಳವೆಂದು ತಿಳಿದುಕೊಳ್ಳುತ್ತಾ ಹೊರೆ ಬಂದೆವು. ಅಂದು ವರ್ಷಕ್ಕೆ ಒಮ್ಮೆ ನೆರವೇರಿಸುವ ಪರ ನಡೆಸುತ್ತಿದ್ದರು. ಅಲ್ಲಿಗೆ ಊಟಕ್ಕೆ ಬರಲೇಬೇಕೆಂದು ವ್ಯವಸ್ತಾಪಕರು ಆಹ್ವಾನಿಸಿದರು. ನಾವು ಅಸೆಡ್ಡೆಯಿಂದ ಬರುವೆವೆವು ಎಂದು ತಲೆಯಾಡಿಸಿ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನವೆಂದು ಹೊರನೆಡೆದೆವು.  DSC00784

DSC00787ಮಡಿವಾಳ ಮಾಚಿದೇವರ ಗುಡಿಗೆ ಹತ್ತಿರವೆಂದು ಅಲ್ಲಿಗೆ ಕಾಲುನಡೆಯಲ್ಲಿಯೇ ಹೋಗಿಬರಲು ನಿಶ್ಚಯಿಸಿದೆವು. ನೆನ್ನ ರಾತ್ರಿ ಮಳೆಯಾಗಿದ್ದರಿಂದ ರಸ್ತೆ ತುಂಬಾ ರಾಡಿಯಿತ್ತು. ಆದರೂ ನಡೆಯುತ್ತಲೇ ಸಾಗಿದೆವು. ಬಹಳ ಹತ್ತಿರದಲ್ಲಿಯೇ ಮಾಚಿದೇವರ ಗದ್ದುಗೆ ಕಾಣಿಸಿತು. ಅಲ್ಲಿ ಸ್ವಾಮಿಗಳು ಇರಲಿಲ್ಲ. ಆದರೂ ಅಲ್ಲಿಯೇ ಯಾರೋ ಒಬ್ಬಾಕೆ ಬಟ್ಟೆ ಹಿಂಡುತ್ತಿದ್ದರು. ನಾವು ಅವರ ತಂಟೆಗೆ ಹೋಗಲಿಲ್ಲ. ಧ್ಯಾನದ ಮನೆಯ ಸುತ್ತಾ ಒಂದು ಸುತ್ತು ಬಂದೆವು. ಅಲ್ಲೇ ಸಮೀಪದಲ್ಲಿ ಆಂಧ್ರದಿಂದ ಬಂದಿದ್ದ ಒಂದು ತಂಡ ಮಾಚೀದೇವರ ಪ್ರದೇಶವನ್ನು ಅಧ್ಯಯನ ಮಾಡಲು ಬಂದಿತ್ತು. ಅವರ ಗಲಾಟೆಯನ್ನು ಅನುಸರಿಸಿ ಹೋದಾಗ ನಮಗೆ ಕಾಣಿಸಿದ್ದು ಮಾಚಿದೇವರ ಕೆರೆಯ ಮತ್ತು ದೇವಸ್ತಾನದ ಜೀಣರ್ೋದ್ದಾರದ ಕಾರ್ಯ ನಡೆಯತ್ತಿತ್ತು. ನಾವು ಅಲ್ಲಿ ಪರಿಶೀಲಿಸಿದಾಗ ಅಲ್ಲಿನ ಶಿಲ್ಪಿಗಳು ತಮಿಳುನಾಡಿನವರು. ಕಲ್ಲುಗಳಿಗೆ ರೂಪ ನೀಡುತ್ತಿದ್ದರು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬುದನ್ನು ನೆನೆೆದು ಸ್ಥಾವರಕ್ಕೋ ಜಂಗಮಕ್ಕೊ ಅಳಿವು ಎನ್ನುವ ಗೊಂದಲಲ್ಲಿ ಅಲ್ಲಿಂದ ನಡೆದೆವು.

DSC00989

 ದಾರಿಯಲ್ಲಿ ಸಿಕ್ಕ ತಮ್ಮನನ್ನು ಕೇಳಿದಾಗ ಬಂದ ದಾರಿಯಲ್ಲಿಯೇ ಹಿಂತಿರುಗಿದರೆ ಅಲ್ಲಿ ಒಂದು ಅಕ್ಕನ ಗುಹೆ ಇರುವುದಾಗಿಯೂ, ಅರಿವಿನ ಮನೆಯು ಒಂದೇ ದಾರಿಯಲ್ಲಿ ಸಿಗುವುದಾಗಿಯೂ ಹೇಳಿದರು. ಅದರಂತೆ ಮುಂದೆ ಸಾಗುವಾಗ ನಮಗೆ ಮೊದಲು ಎದುರಾಗಿದ್ದು ಜಗ ಜ್ಯೋತಿ ಬಸವೇಶ್ವರರ ಅರಿವಿನ ಮನೆ. ಅಂದು ಸ್ವಾಮಿಗಳು ಅಲ್ಲಿಗೆ ಇನ್ನೂ ಬಂದಿರಲಿಲ್ಲ. ನಾವು ಹೊರಗಡೆಯಿಂದಲೇ ಬಸವಣ್ಣನವರ ಅರಿವಿನ ಮನೆಯ ದರ್ಶನ ಮಾಡಿದೆವು. ಇದು ತ್ರಿವಿಧಿ ಲಿಂಗಕ್ಕೆ ಕುಳಿತ ಜಾಗವೆಂದು ಅದು ಖ್ಯಾತಿಯಾಗಿದೆ.

ಮುಂದೆ ನಾವು ಅಕ್ಕನ ಗುಹೆಗೆಂದು ಹೊರೆಟೆವು ಅಲ್ಲಿ ನಮಗೆ ಎದುರಾಗಿದ್ದು ಮಹಾದೇವಿಯಕ್ಕನ ಗುಹೆಯಲ್ಲ ಅಕ್ಕ ನಾಗಮ್ಮನ ಗುಹೆ ಅವರು ಧ್ಯಾನ ಮಾಡುತ್ತಿದ್ದದ ಗುಹೆ. ಇಲ್ಲಿಯೂ ಗುಹೆಯ ಜೀಣರ್ೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ಮಾಚಿದೇವರ ಗುಡಿಯನ್ನು ಜೀಣರ್ೋದ್ದಾರ ಮಾಡುತ್ತುದ್ದವರ ಗುಂಪಿನವರೇ ಇಲ್ಲಿಯೂ ಕೆಲಸಮಾಡುತ್ತಿದ್ದಾರೆ.

ಅಲ್ಲಿಗೆ ನಾವು ಸಾಕಷ್ಟು ದಣಿದ್ದೆವು. ಸುಧಾರಿಸಿಕೊಳ್ಳುತ್ತಾ ಡಿಇಡ್ ಕಾಲೇಜಿನ ಬಳಿಗೆ ಬಂದು ಸ್ವಲ್ಪ ತಂಪು ಪಾನೀಯವನ್ನು ತೆಗದುಕೊಂಡು ಮುಂದೆ ಅಲ್ಲಿಂದಲೇ ಒಂದು ಆಟೋ ಹಿಡಿದು ಮುಂದೆ ಸಾಗಿದೆವು. ಆತ ನಮ್ಮ ದರ್ಶನದ ದರ್ಶಕನಾಗಿದ್ದ. ಆಟೋವನ್ನು ಹತ್ತುವುದಕ್ಕೆ ಮುಂಚೆ ನಮ್ಮನ್ನು ಬಸವಣ್ಣನ ದೇವಸ್ಥಾನ ನೋಡದೇ ಇಲ್ಲಿಯವರೆಗೆ ಬಂದಿದ್ದಕ್ಕೆ ನಾವು ಏನೋ ಅಪರಾಧ ಮಾಡಿದಂತಹ ನೋಟ ಬೋರುತ್ತಿದ್ದರು. ಅವೆಲ್ಲವನ್ನು ಸಾವರಿಸಿಕೊಂಡು. ಆಟೋ ಹತ್ತಿ ಪ್ರಯಾಣ ಮುಂದುವರೆಸಿದೆವು.

ನಮ್ಮನ್ನು ಆಟೋ ಡ್ರೈವರ್ ಅನುಭವ ಮಂಟಪ ಇರುವ ಜಾಗಕ್ಕೆ ಕರೆದೊಯ್ದ. ಅಲ್ಲಿ ನೋಡಿದರೆ ಮೊದಲಿಗೆ ನಮಗೆ ಆಶ್ಚರ್ಯ. ಕಾರಣ ಅಲ್ಲಿ ಅನುಭವ ಕಟ್ಟಡದ ನಿಮರ್ಾಣವಾಗುತ್ತಿದೆ. ನಾವು ಕಟ್ಟಡದ ಬಳಿಗೆ ಹೋಗುತ್ತಿದ್ದಂತೆಯೇ ಅನಾಥಾಲಯದ ಮಕ್ಕಳು ಬಂದು ನಮ್ಮನ್ನು ಅವರ ನಿರ್ವಹಿಕಿಯ ಬಳಿಗೆ ಬಿಡದೆ ಕರೆದೊಯ್ದರು. ನಾವು ಒಲ್ಲದ ಮನಸ್ಸಿನಿಂದ ಅಲ್ಲಿಗೆ ಹೋದೆವು. ಅವರು ಮೊದಲಿಗೆ ಹೇಳಿದ ಮಾತೇ ಶರಣು. ನಮ್ಮನ್ನು ಚಕಿತ ಮಾಡಿತು. ನಂತರ ಕುಚರ್ಿ ಹಾಕಿ ಕೂರಲು ಹೇಳಿದರು. ನಂತರ ನೀರು ಕೇಳಿದರು, ಪ್ರಸಾದ ಸ್ವೀಕರಿಸಲು ಆಹ್ವಾನಿಸಿದರು. ನಮಗೆ ಬೇರೆ ಕಡೆಯಲ್ಲಿ ಹಣಕ್ಕಾಗಿ ಸಾಕಷ್ಟು ನಾಟಕವಾಡಿ ಸಂಪಾದಿಸುವ ಮಂದಿಯನ್ನು ಕೇಳಿದ್ದೆವು ನೋಡಿದ್ದೆವು ಇಲ್ಲಿ ನಮಗೆ ಆದ್ದದ್ದು ಅದೇ ಅನುಭವ. ಇರಲಿ ಏನಾಗುವುದೋ ನೋಡಿಯೇ ಬಿಡೋಣವೆಂದು ಸುಧಾರಿಸಿಕೊಂಡು ನೀರು ಕುಡಿದು. ಎದ್ದೆವು ಅವರು ನಮ್ಮ ಅಡ್ರಸ್ ಕೇಳಿದರೂ ಇನ್ನೂ ದಾನ ಮಾಡಲು ನಮ್ಮನ್ನು ಪೀಡಿಸುವರೆಂದು ತಿಳಿಯಿತು ತುಂಬಾ ಜಾಣತನದಿಂದ ಆಫೀಸಿನ ಅಡ್ರೆಸ್ ಕೊಟ್ಟೆವು. ಮಕ್ಕಳನ್ನು ಜೊತೆ ಮಾಡಿ ಅವರು ಮಾಡುತ್ತಿದ್ದ ಕೆಲಸಗಳನ್ನು ತೋರಿಸಲು ಕಳುಹಿಸಿದರು. ನಾವು ಒಲ್ಲದ ಮನಸ್ಸಿನಿಂದಲೇ ಹೊರೆಟೆವು ಜ್ಞಾನದ ಬಲದಿಂದ ಅಜ್ಞಾನದ ಕೇಡು ಎನ್ನುವಂತೆ ನಮ್ಮ ಅಜ್ಞಾನ ದೂರವಾಯಿತು. ಅವರು ನಿಮರ್ಿಸುತ್ತಿರುವ ಸುಮಾರು 39-40 ಅಡಿ ಬಸವಣ್ಣನ ಮೂತರ್ಿಯ ಕಾರ್ಯ. ಎರಡು ಗುಹೆಗಳ ನಿಮರ್ಾಣ ಮೊದಲನೇ ಗುಹೆ ಬಹುಪಾಲು ಪೂರ್ಣಗೊಂಡಿದೆ. ಮಹದೇವಿಯಕ್ಕನ ಗುಹೆ ಮಾತ್ರ ಇನ್ನೂ ಸಾಕಷ್ಟು ಕೆಲಸ ನಡೆಯಬೇಕಿದೆ. ನೆಲದಲ್ಲಿ ಸುರಂಗಗಳನ್ನು ಕೊರೆದು ಗವಿಗಳನ್ನು ನಿಮರ್ಿಸುತ್ತಿದ್ದಾರೆ. ಗುಹೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಅನುಭಾವಿಗಳ ಲೋಕದಲ್ಲಿ ಸೇರಿಹೋದಂತಹ ಅನುಭವ. ಒಂದೊಂದು ಗುಹೆಯಲ್ಲಿಯೂ ಒಬ್ಬಬ್ಬ ಅನುಭಾವಿ. ಪ್ರಭುದೇವರು, ಚನ್ನಬಸವಣ್ಣ, ನೀಲಾಂಬಿಕೆ, ಮಾಚಿದೇವರು, ಕಕ್ಕಯ್ಯ, ಚೌಡಯ್ಯ, ದಾಸೀಮಯ್ಯ, ಮಹದೇವಿಯಕ್ಕ ಹೀಗೆ ಪ್ರತಿಯೊಬ್ಬರ ವಿಗ್ರಹಗಳೂ ಪ್ರತಿಷ್ಠಾಪನೆಯಾಗುತ್ತಿವೆ. ಈ ಎಲ್ಲಾ ಕಾರ್ಯಗಳು ಪೋರ್ಣವಾದರೆ ನೋಡಲು ಎರಡು ಕಣ್ಣು ಸಾಲದು. ವೆಚ್ಚಕ್ಕೆ ಹೊನ್ನಿರಲು, ಸತಿಯು ಜೊತೆಇರಲು, ಸ್ವರ್ಗವೇ ಇಲ್ಲಿ ತೆರೆಯುತ್ತದೆ ಎಂದರೆ ತಪ್ಪಾಗಲಾರದು. 12 ಶತಮಾನವೇ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ ಎನ್ನಬಹುದು. ಆದರೆ ಇಚ್ಚೆ ಅರಿವ ಗೆಳಯ/ಗೆಳತಿ ಇರಬೇಕಷ್ಟೆ. DSC00996

ಅಲ್ಲಿನ ಎಲ್ಲಾ ಜಾಗಗಳನ್ನು ನೋಡಿ ನಾವು ಭಾವಲೋಕದಲ್ಲಿದ್ದೆವು. ನಮ್ಮ ಜೊತೆಗೆ ಬಂದ ಇಬ್ಬರು ಹುಡುಗರು ಶಿವು ಮತ್ತು ರಾಜೇಂದ್ರ ನಮ್ಮನ್ನು ವಾಪಸ್ಸು ಆಶ್ರಮದ ಕಛೇರಿಗೆ ಕರೆತಂದರು. ನಾವು ಅಂದುಕೊಂಡಿದೆ ಉಲ್ಟವಾಗಿತ್ತು. ನಮಗೆ ಅರಿವಿಲ್ಲದೇ ಅವರು ಕೇಳುವುದಕ್ಕೆ ಮುಂಚೆಯೇ ನಮ್ಮ ಬಳಿಯಲ್ಲಿನ ಕೊಂಚ ಹಣವನ್ನು ಒಗ್ಗೂಡಿಸಿ ಅವರಿಗೆ ಕೊಟ್ಟು ರಸೀತಿ ಪಡೆದೆವು. ಅವರು ನಮ್ಮನ್ನು ಪರಸೆಗೆ ಕರೆಯುವುದನ್ನು ಮರೆಯಲಿಲ್ಲ.

DSC00888

ನಾವು ಈಗ ಬಂದು ಸೇರಿದ್ದು ಬಸವದೇವರ ಗುಡಿಗೆ ಅದು ಸಂಘನಿಮರ್ಿತ ದೇವಸ್ತಾನವಾಗಿತ್ತು. ದೇವಸ್ತಾನದ ಒಳಗೆ ಬಣ್ಣನವರ ವಿಗ್ರಹವಿದೆ. ಆ ಗರ್ಭಗುಡಿಯನ್ನು ಸುತ್ತಿಬರುವಷ್ಟು ವ್ಯವಸ್ಥೆ ಇದ್ದುದ್ದರಿಂದ ನಾವು ಸಾವಕಾಶವಾಗಿ ಸುತ್ತಿಬಂದೆವು. ಅಲ್ಲಿನ ಗೋಡೆ ಗೋಡೆಗೂ ಭಕ್ತಿ ಪ್ರಧಾನ ಪಟಗಳೇ ರಾರಾಜಿಸುತ್ತಿದ್ದವು. ಎಲ್ಲೂ ಹನ್ನರಡನೇ ಶತಮಾನವನ್ನು ನೆನಪಿಸುತ್ತಿದ್ದವು. ನಮಗೆ ಅರಿವಿಲ್ಲದೇ ವಚನಯುಗವನ್ನು ಪ್ರವೇಶಿಸಿದ್ದೆವು. ಅಲ್ಲಿನ ವಾಚ್ಮಾನ್ ನಮಗೆ ನೀವು ತಪ್ಪದೇ ಪರಸೆ ಕಟ್ಟೆಯನ್ನು ನೋಡಬೇಕೆಂದು ತಾಕೀತು ಮಾಡಿದ. ಹಾಗೆಯೇ ನಾವು ಅಪರೂಪವಾಗಿ ಬಂದಿರುವುದರಿಂದ ಪ್ರಭುದೇವರ ಗದ್ದುಗೆಯಲ್ಲಿ ಊಟ ಮಾಡಿಯೇ ಹೋಗಬೇಕೆಂದು ನಮ್ಮ ಬೆಂಗಳೂರಿನಲ್ಲಿಯೂ ದೊರೆಯದಂತಹ ಬೂರಿ ಭೊಜನ ಸಿಗುವುದಾಗಿ ಹೇಳಿದ ಅವನ ಮಾತನ್ನು ತೆಗೆಯಲು ನಮಗೆ ತೆಗೆಯಲು ಸಾಧ್ಯವಾಗಲಿಲ್ಲ. ಅನ್ನದೇವರ ಮುಂದೆ ಇನ್ನದೇವರ ಕಾಣೆ ಎಂದು ಅಲ್ಲಿ ಊಟ ಮಾಡಿಯೇ ಮುಂದಿನ ಪ್ರಯಾಣವೆಂದು ನಿಧರ್ಾರವಾಯ್ತು.DSC00864

DSC00859

ಆಟೋದವನು ನಮ್ಮನ್ನು ನೇರವಾಗಿ ಪರಸಿ ಕಟ್ಟೆ ಅಥವಾ ಪರಸೆ ಕಟ್ಟೆ ಬಳಿಗೆ ಕರೆದು ತಂದ. ನಾವು ಅಲ್ಲಿಗೆ ಬರಲು ಹಿಡಿದ ಮಾರ್ಗ ನಿಜಕ್ಕೂ ನಿಜಕ್ಕೂ ನಿಂದಕರಿರಬೇಕು ಕೇರಿಯೋಳ್ ಹಂದಿಯ ತೆರದಲಿ ಎನ್ನುವಂತಿತ್ತು. ಅಲ್ಲಿ ಹಂದಿಗಳು ಹೆಚ್ಚಾಗಿದ್ದವು.

DSC00898DSC00899ನಾವು ಕಟ್ಟೆಯನ್ನು ಸೇರುತ್ತಿದ್ದಂತೆ ಅಲ್ಲಿ ಒಬ್ಬರು ಹಿರಿಯ ನಾಗರಿಕರು ಅಲ್ಲಿಯೇ ಕಾಯುತ್ತಿದ್ದರು. ಅವರನ್ನು ಆ ಜಾಗದ ಮಹತ್ವ ಕಳಿದಾಗ, ಅವರು ಹೇಳುವಂತೆ ಆ ಜಾಗ ಬಸವಣ್ಣನವರು ಸುಮಾರು ಒಂದು ಲಕ್ಷದ ತೊಂಭತ್ತು ಮಂದಿಗೆ ಊಟಕ್ಕೆ ಬಡಿಸುತ್ತಿದ್ದ ಜಾಗವದು. ಈ ಅಲ್ಲಿ ಅಷ್ಟು ಜನರಿಗೆ ಊಟ ಬಡಿಸುತ್ತಿದ್ರು ಎಂದರೆ ನಂಬಲಾಗದು. ಅಲ್ಲಿ ಸುತ್ತ ಮುತ್ತಲು ಸಾಕಷ್ಟು ಮೆನಗಳಿವೆ. ಆಕಟ್ಟೆಯ ಎದುರಿಗೆ ಒಂದು ಕಸಾಯಿಖಾನಿಯೂ ಇದೆ. ಅದೊಂದು ಭಾವೈಕ್ಯತೆಗೊಂದು ಬಿರುಕು ತರಿಸುವ ಜಾಗ ಅದು. ಅಲ್ಲಿಗೆ ನಿಯೋಜಿಸಲಾದ ಪೋಲೀಸ್ ವ್ಯಕ್ತಿ ಚೆನ್ನಾಗಿ ಮಲಗಿ ಕೆಲಸ ಮಾಡುತ್ತಿದ್ದರು. ನಾವು ಹಿರಿಯರಲ್ಲಿ ಕೇಳಿದ್ದು  ನಿಜವಾದ 12ನೇ ಶತಮಾನ ನೆನಪಿಸುವ ಜಾಗವನ್ನು. ಅವರ ಪ್ರಕಾರ ಅನುಭವ ಮಂಟಪ ನಾವು ಹಿಂದೆ ನೋಡಿದ ಜಾಗದಲ್ಲಿ ಇರಲಿಲ್ಲ. ಅದು ಬಸವಣ್ಣನ ದೇವಸ್ತಾನದ ಹಿಂಬದಿಯಲ್ಲಿರುವ ಮುಸಲ್ಮಾನರ ದರ್ಗದ ಭಾಗದಲ್ಲಿರಬಹುದೆಂದು ಹೇಳಿದರು. ನಾವು ಈಗಾಗಲೇ ಬಸವಣ್ಣನ ದೇವಸ್ತಾನದಿಂದ ಬಂದಿದ್ದರಿಂದ ಮತ್ತೆ ಅಲ್ಲಿಗೆ ಹೋಗಿ ನೋಡಲಾಗಲಿಲ್ಲ. ಹೆಣ್ಣ ಮಾಯೆ ಎಂಬರು ಹೆಣ್ಣ ಮಾಯೆಯಲ್ಲ, ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ, ಮನದ ಮುಂದಣದ ಆಸೆಯೆ ಮಾಯೆ ಎಂದು ನಾವು ಅಲ್ಲಿಂದ ಮಾಯವಾದೆವು.

basava kalyana fort

ಡ್ರೈವರ್ ನಮ್ಮನ್ನು ಚಾಲುಕ್ಯರ ಕಾಲದಲ್ಲಿ ನಿಮರ್ಿಸಿರಬಹುದಾದ ಕೋಟೆಯ ಬಳಿಗೆ ಕರೆದೊಯ್ಯದ. ಅಂದು ಅಲ್ಲಿ ರಜೆ ಇರಬಹುದೆಂದು ಹೋಗಿದ್ದು ಆದರೆ ಕೋಟೆಯ ಬಾಗಿಲು ತೆರದಿತ್ತು. ನಾವು ಒಳಗೆ ಹೋದಾಗ ಯಾರೋ ಸಾಧುರಿಯ ಮೂರುಜನ ಭಂಗಿ ಸೇದುತ್ತಿದ್ದರು ಎನಿಸುತ್ತದ ಅವರ ಬೆನ್ನಿಗೆ ಜೈಲಿನ ಕೋಣೆಗಳಿದ್ದವು. ಅಲ್ಲಿಂದ ಮುಂದೆ ಒಂದೊಂದು ಮೂಲೆಯನ್ನು ಬಿಡದೆ ಎಲ್ಲವನ್ನು ತೋರಿಕೊಂಡು ಬಂದ ಡ್ರೈವರ್ ಕೋಟೆಯ ಮೇಲೆ ಒಂದು ಪಿರಂಗಿ ಇದೆ ಅದನ್ನು ಇಬ್ಬರು ಸೇರಿ ಅದರ ದಿಕ್ಕನ್ನು ಬದಲಿಸಬಹುದಿತ್ತು. 360 ಡಿಗ್ರಿಗೂ ಸುತ್ತುತ್ತದೆ. ಡ್ರೈವರ್ ಹೇಳುವಂತೆ ಪಿರಂಗಿಯಿಂದ ಹಾರಿದ ಗುಂಡು ಕೋಟೆಯ ಎಡಭಾಗದಲ್ಲಿರಬಹುದಾದ ಗುಡ್ಡವನ್ನು ನೆಲಸಮ ಮಾಡಿತ್ತು ಎಂದು ಇರಹುದು ಇಲ್ಲದೆಯೂ ಇರಬಹುದು. ಆದರೆ ಅಲ್ಲಿಂದ ಕಲ್ಯಾಣದ ನೋಟವಂತೂ ಅದ್ಭುತ. ಕೋಟೆಯ ಕೆಳಗೆ ಇಳಿದು ಬರುತ್ತಿದ್ದಂತೆ ಇದು ನಿಜಾಮರ ಸಂಸ್ಕೃತಿಯನ್ನು ಶೈಲಿಯನ್ನು ನೆನಪಿಸುತ್ತಿತ್ತು. ಬಹುಶಃ ನಿಜಾಮರ ಕಾಲದ್ದೇ. ಕೋಟೆಯಿಂದ ಹೊರಗೆ ಬಂದಾಗ ಅಲ್ಲಿ ಒಂದು ಸಂಗ್ರಹಾಲಯವಿತ್ತು. ಹಲವರು ಹೇಳುವಂತೆ ಅಲ್ಲಿ ಜೈನರ ಕಾಲಕ್ಕೆ ಸೇರಿದ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗುತ್ತದೆ.
ನಮಗೆ ಸಾಕಷ್ಟು ಸಮಯವಾಗಿದ್ದರಿಂದ ಅಲ್ಲಿಂದ ಆಟೋ ಡ್ರೈವರ್ ಜೊತೆಗಿನ ಒಪ್ಪಂದದಂತೆ ಬಸ್ ನಿಲ್ದಾಣಕ್ಕೆ ಬದಲಾಗಿ ಪ್ರಭುದೇವರ ಗದ್ದುಗೆಯ ಬಳಿಗೆ ಬಿಡಿಸಿಕೊಂಡೆವು. ನಾವು ಮಾತನಾಡಿದ್ದಕಿಂತ ಹೆಚ್ಚಿನ ಹಣ ನೀಡಿ ಕಳುಹಿಸಿದೆವು. ನಾವು ಬರುವುದನ್ನೇ ಕಾಯುತ್ತಿದ್ದರೇನೋ ಎಂಬಂತೆ ಬರಮಾಡಿಕೊಂಡರು. ಒಳಗೆ ಕರೆದು ಕೈಗೆ ನೀರು ಕೊಟ್ಟು ಸಹಪಂಕ್ತಿಯಲ್ಲಿ ಊಟಕ್ಕೆ ಕುರುಳಿಸಿದರು. ಮೊದಲು ಹುಗ್ಗಿ ಹಾಕಿದರು ಅದು ಮುಗಿಯುವುದರಲ್ಲಿ, ಗೋಧಿ ಚಪಾತಿ-ಪಲ್ಯ, ಅನ್ನ ತಿಳಿಸಾರು ಮೃಷ್ಟಾನ್ನವೇ ಸರಿ. ನಾವು ಅಲ್ಲಿಗೆ ಹೋಗದಿದ್ದರೆ ಕಳೆದುಕೊಳ್ಳುತ್ತಿದ್ದೆ ಹೆಚ್ಚು ಎನಿಸುತ್ತಿತ್ತು. ಸೊಗಸಾಗಿ ಊಟ ಮುಗಿಸಿ. ಕೈ ತೊಳೆದು. ಹೊರಬಂದೆವು.

ನಾವು ಬಂದ ದಾರಿಗೆ ಸುಂಕವಿಲ್ಲವೆಂದು ಸಕರ್ಾರಿ ಆಸ್ಪತ್ರೆಯ ಹಿಂಬದಿಯ ಕಾಲುದಾರಿಯಲ್ಲಿ ಮತ್ತೆ ನಿಲ್ದಾಣ ಸೇರಿ ಮನೆಗೆ ಸೇರಿಕೊಂಡೆವು. ಇಡೀ ಪ್ರಯಾಣವೇ ಮತ್ತೆ ಮತ್ತೆ ಕಾಡುವ ಕಲ್ಯಾಣ ಪಟ್ಟಣವಾಗಿದೆ. ಮತ್ತೊಮ್ಮೆ ಅಲ್ಲಿಗೆ ಹೋಗಲೇ ಬೇಕೆನಿಸುತ್ತದೆ. ಅಲ್ಲಿ ನಡೆಯುತ್ತಿರುವ ಜೀಣರ್ೋದ್ಧಾರದ ಕೆಲಸ ಮುಗಿಸಿದ ಮೇಲೆ ಮತ್ತೊಮ್ಮೆ ಕಲ್ಯಾಣದ ಸಾಲನ್ನು ಸೇರಬೇಕೆಂದು ಮನಸ್ಸು ಮನಸ್ಸು ಮಾಡಿದೆ

Advertisements
Comments
  1. Prasad says:

    Thanks for the post. I am planning for a trip to Kalyana during this weekend and hence searching on net for some info. Then I came across your post. I got an idean now and your post defnitely will help me to explore kalyana better.

  2. butti says:

    Thank u very much for comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s