ಸೂರಿ ದುನಿಯಾದಿಂದ ಸಂಪೂರ್ಣ ಹೊರ ಬಂದಿದ್ದಾರೆ. ಇತ್ತೀಚೆಗೆ ನೋಡಿದ ಇಂತಿ ನಿನ್ನ ಪ್ರೀತಿಯಾ ಸಿನೆಮಾ, ಭಾವನೆಗೆ ಹೆಚ್ಚಿನ ಒತ್ತು ನೀಡಿದೆ ಎಂದರೆ ತಪ್ಪಾಗಲಾರದು. ರವಿ ಕಾಣದ್ದನ್ನು ಕವಿ ಕಂಡ ಕವಿ ಕಾಣದನ್ನು ಕುಡುಕ ಕಂಡ ಎಂಬ ಮಾತಿದೆ. ಆದರೆ ಕುಡುಕ ಕಾಣದನ್ನು ಸೂರಿ ಕಂಡ ಎಂದರೆ ತಪ್ಪೇ?. ಇಲ್ಲಿ ಪ್ರತಿಯೊಂದು ಪಾತ್ರಗಳು ತನ್ನ ಪಾತ್ರಗಳಿಗೆ ನಿಯತ್ತಾಗಿವೆ. ರಘು ಅವರ ಪಾತ್ರ ಆ ಪಾತ್ರದಿಂದ ಹೊರ ಹೊಮ್ಮುವ ಹಾಸ್ಯ ಇವೆಲ್ಲವೂ ಸಿನೆಮಾಗೆ ಪೂರಕವಾಗಿದೆ. ರಾಜೀವ ಎಂಬ ವ್ಯಕ್ತಿಯನ್ನು ಮೈದುಂಬಿಕೊಂಡು ಅಭಿನಯಿಸಿದವರು ಕಿಟ್ಟಿ. ತನ್ನ ಅಣ್ಣ ರಸ್ತೆಯಲ್ಲಿ ಬಿದ್ದಿದ್ದ ರಾಜೀವನನ್ನು ಮನಗೆ ಕರೆ ತರುವ ದೃಶ್ಯವಂತೂ ಅಬ್ಬಾ ಅದ್ಭುತ. ನಾವು ಕಾಣಬಹುದಾದ ಉತ್ತಮ ದೃಶ್ಯಗಳಲ್ಲಿ ಒಂದಾಗಿದೆ. ಪರಿಮಳ ತನ್ನ ಜೀವನದ ಚಿಗುರುವ ಕಾಲದಲ್ಲಿ ಸಂಧ್ಯಾಕಾಲವನ್ನು ಕಾಣುವುದು ಆಕಸ್ಮಿಕ. ಹಾಡುಗಳು ಕಿವಿಗೆ ಇಂಪು ನೀಡುತ್ತವೆ ಅದರಲ್ಲಿ ಎರಡು ಮಾತಿಲ್ಲ. ಒಂದು ಚಿತ್ರದ ಯಶಸ್ಸು ಅ ಚಿತ್ರದಲ್ಲಿ ಪ್ರೇಕ್ಷಕನನ್ನು ಸೆಳೆದುಕೊಳ್ಳುವುದು. ಈ ಚಿತ್ರ ಅದನ್ನು ಸಾಧಿಸುತ್ತದೆ ಎಂದರೆ ತಪ್ಪಾಗಲಾರದು. ಎಲ್ಲರೂ ನೋಡಬಹುದಾದ ಒಂದು ಚಿತ್ರ. ಚಿತ್ರದಲ್ಲಿ ಬಳಸಲಾಗಿರುವ ಕುಡಿಯುವ ದೃಶ್ಯದ ಬಗ್ಗೆ ಹೆಚ್ಚಿನ ಮಾತು ಇತ್ತು ಆದರೆ ಅದು ಅವಶ್ಯಕತೆಗಿಂತ ಅಧಿಕವಿಲ್ಲವೆನ್ನುವುದು ನನ್ನ ವಾದ. ಕುಡಿಯದವರು ಕುಡಿಯುವವರ ಬಗ್ಗೆ ಅಸಹ್ಯ ಪಡುತ್ತಾರೆ, ಕುಡುಕರು ತನಗಂತ ಹೆಚ್ಚು ಕುಡಿಯುತ್ತಾನೆಂದು ಅಸೂಯೆ ಅನ್ನಿಸುತ್ತದೆ.