ಭಾಮಿನಿ ಷಟ್ಪದಿ

Posted: March 18, 2009 in ಹೊಸತು

ಚೇತನಾ ತೀರ್ಥಹಳ್ಳಿ ರಚಿಸಿರುವ ಈ ಕೃತಿಯಲ್ಲಿ ಮೊದಲಿಂದಲೂ ಸಣ್ಣದಾಗಿ ಅಗ್ನಿ ಪರ್ವತ ಕುದಿಯುತ್ತಲೇ, ಹಾವಿನಂತೆ ಬುಸುಗುಟ್ಟುತ್ತಲೇ ಇರುತ್ತದೆ. ಒಟ್ಟಾರೆಯಾಗಿ ಇಡೀ ಕೃತಿಯನ್ನು ಒಂದು ದಿನವನ್ನಾಗಿ ಅಥವಾ ಇಡೀ ಕೃತಿಯನ್ನು ಒಂದು ವ್ಯಕ್ತಿಗೆ ಕೇಂದ್ರವಾಗಿಸಿ ನೋಡಿದರೆ, ಅಲ್ಲಿರುವ ನಾನು ಹೇಳಬಯಸುತ್ತಿರುವ ಆ ಅಗ್ನಿಪರ್ವತದ ಅನುಭವವಾಗುತ್ತದೆ. ಅಗ್ನಿಪರ್ವತಕ್ಕೂ ಒಂದು ಕಾಲವಿದೆ ಅಲ್ಲಿಯವರೆಗೂ ಸುಮ್ಮನಿರುತ್ತದೆ ಆದರೆ ಒಂದಲ್ಲೊಂದು ಕಾಲಕ್ಕೆ ಅದು ಹೊರಬರಲೇ ಬೇಕು. ಅದರಂತೆಯೇ ಚೇತನಾರವರ ಕೃತಿಯಲ್ಲಿಯೂ ಭಾಸವಾಗುತ್ತದೆ. ಇಡೀ ಗಂಡು ಸಂತಾನವನ್ನೇ ವಕ್ರವಾಗಿ ನೋಡುವ ಚೇತನಾ ಅವರ ನೋಟಕ್ಕೇ ಪ್ರತ್ಯೇಕ ಆಯಾಮವನ್ನು ಸೃಷ್ಟಿಸುತ್ತಾರೆ. ಕೃತಿಯ ಪ್ರಾರಂಭದಲ್ಲಿ ಸ್ವಲ್ಪ ಮಟ್ಟಿನ ಚಿಕ್ಕ ಸಾಂಪ್ರದಾಯಿಕ ಹುಡುಗಿಯಾಗಿ ಯಾವಾಗಲೂ ಮದುವೆಯ ಬಗೆಗೆ ತನ್ನ ಮತ್ತು ಮನೆಯವರ ಸಾಂಪ್ರದಾಯಿಕ ಮನಸ್ಥಿತಿಗಳ ಬಗ್ಗೆ ಹೇಳುತ್ತಲೇ. ಪುರುಷ ಪ್ರವೇಶಿಸಲಾಗದ ಹೆಣ್ಣು ಪ್ರಪಂಚದಿಂದ ಎತ್ತರದಲ್ಲಿ ನಿಂತು ಘಜರ್ಿಸುತ್ತಾರೆ. ಅದರಲ್ಲಿನ ಹುಡುಗಿ ಮುಂದೆ ಮದುವೆಯ ವೈವಾಹಿಕ ಸಂಬಂಧದ ಬಗೆಗೂ ತನ್ನದೇ ಆದ ಸ್ತ್ರೀ ಮುಖಿ ಮತ್ತು ಸಮಾಜಮುಖಿ ಭಾವನೆಯಲ್ಲಿ ನೋಡುವ ಪ್ರಯತ್ನ ಮಾಡಿದ್ದಾರೆ. ಬೆಳದ ಮಗಳು ಮದುವೆಯನ್ನು ತನಗೆ ಬೇಕೋ ಬೇಡವೋ ಮಾಡಿಕೊಂಡಿದ್ದಾಳೆ ನಂತರ ಮಕ್ಕಳೂ ಆಗಿವೆ ಅವುಗಳಲ್ಲಿ ತನ್ನವು ಇವೆ ಬೇರೆಯವೂ ಇವೆ. ಸಾಂಪ್ರದಾಯಿಕ ಕುಟುಂಬದ ಹೆಣ್ಣು ವೈವಾಹಿಕ ಸಂಬಂಧ ಪ್ರಾರಂಭವಾದ ನಂತರ ತನ್ನನಿಸಿಕೆಗಳನ್ನು ಯಾವ ರೀತಿ ವ್ಯಕ್ತಪಡಿಸಬಹುದೋ ಹಾಗೆಯೇ ಚೇತನಾ ಸಂಸಾರವೆಂಬ ಹೆಣ ಎಂಬ ಕಥೆ/ಕಾವ್ಯದ ಮುಂದಕ್ಕೆ ಬರೆಯುತ್ತಾ ಹೋಗಿದ್ದಾರೆ. (ಅಂದರೆ ಒಬ್ಬ ಸಾಂಸಾರಿಕ ಹೆಣ್ಣು ವೈವಾಹಿಕ ಜೀವನ ಪ್ರಾರಂಭಿಸಿದ ನಂತರ ಬರೆಯಲು ಪ್ರಾರಂಭಿಸಿದರೆ ಹೇಗಿರುತ್ತದೋ ಹಾಗೆ) ಆದರೂ ಕೆಲವು ಕಥೆ/ ಕಾವ್ಯಗಳೂ ಇದಕ್ಕೆ ವ್ಯತಿರಿಕ್ತ ವಾಗಿರುವುದು ಸುಳ್ಳಲ್ಲ. ಒಟ್ಟಾರೆಯಾಗಿ ಚೇತನಾ ಬರೆದಿರುವ ಎಲ್ಲಾ ಕವಿತೆಗಳು ಅನೇಕ ಹೆಣ್ಣು ಮಕ್ಕಳ ಕಥೆಯಾಗಿರುವುದು ನಿಜವಾಗಿರುವ ಮಾತು ಹಾಗೆಯೇ ನಾನು ನೋಡಿದ ರೀತಿ ಮಾತ್ರ ಒಬ್ಬಳೇ ಹೆಣ್ಣು ಮಗಳ ಕಥೆಯಾಗಿ. ನಾನು ಪ್ರಾರಂಭದಿಂದಲೂ ಹೇಳುತ್ತಾ ಬಂದಿರುವಂತೆ ಹೆಣ್ಣು ಪ್ರತಿಯೊಂದು ಕವನದಲ್ಲಿ ಅಗ್ನಿ ಪರ್ವತದಂತಿದ್ದವಳು ಸ್ಪೋಟವಾಗದೇ ಹಾಗೆಯೇ ಹರಿದು ತಣ್ಣಗಾಗಿದ್ದು ಮಾತ್ರ ಸ್ವಲ್ಪ ಮಟ್ಟಿನ ನಿರಾಸೆಯನ್ನುಂಟು ಮಾಡುತ್ತದೆ. ಸದಾ ಕಾಲ ಸ್ಪಟಿಕದ ಮಣಿಯಂತೆ ಸ್ಪೋಟಿಸುತ್ತಲೇ ಇಡೀ ಸಮಾಜಕ್ಕೆ ಹಾಗೂ ಗಂಡು ಕುಲಕ್ಕೇ ಚುರುಕು ಮುಟ್ಟಿಸುತ್ತಾ ಹೋಗಬೇಕಿದೆ. ಚುರುಕು ಮುಟ್ಟಿಸುವ ಕಾವ್ಯದ ವ್ಯಕ್ತಿ ಹಾಗೆಯೇ ನೋಡುಗರಾಗುವುದು ಅವರಿಗಾಗಿ ವಿಷಾದಿಸುವುದು,. ಅಲ್ಲಿ ಪ್ರತಿಭಟನೇ ಇಲ್ಲವಾಗಿದ್ದು ನಿರಾಶೆಗೆ ಕಾರಣವೆನಿಸುತ್ತದೆ. ಪುರಾಣದಿಂದ ಪ್ರಾರಂಭವಾದದ್ದು ಮತ್ತೆ ಪುರಾಣದ ಕಡೆಗೆ ಹೆಜ್ಜೆ ಹಾಕುತ್ತಿದೆಯೋ ಎನಿಸುತ್ತದೆ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s