ಸ್ಲಂಡಾಗ್ ಮಿಲನೇರ್

Posted: February 24, 2009 in ವಾಕಿ ಟಾಕಿ

slumdog_millionaire_poster1ಸ್ಲಂಡಾಗ್ ಮಿಲನೇರ್
ಈ ಚಿತ್ರ ಬಿಡುಗಡೆಯಾದಾಗಿನಿಂದ ಒಂದಲ್ಲೊಂದು ಟೀಕೆಗೆ ಗುರಿಯಾಗಿದೆ. ಮೊದಲು ಈ ಚಿತ್ರದ ಹೆಸರಿಗೆ ಟೀಕೆ. ನಂತರ ಅದರಲ್ಲಿ ಭಾರತೀಯ ಅವಹೇಳನ ಬೇರೆ. ಹೀಗೆ ಒಂದೊಂದು ಟೀಕೆಗಳು ಹರಿದು ಬರುತ್ತಿದ್ದಂತೆ ಪ್ರಶಸ್ತಿಗಳೂ ಬರುತ್ತಲೇ ಇದ್ದವು. ಕೊನೆಗೊಂದು ದಿನ ಆಸ್ಕರ್ ಪ್ರಶಸ್ತಿಗೂ ನಾಮನಿದರ್ೇಶವೂ ಆಗಿಬಿಟ್ಟಿತು. ಅದೂ ಹತ್ತು ಪ್ರತ್ಯೇಕ ವಿಭಾಗದಲ್ಲಿ. ಮೊನ್ನೆ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ವೀಕ್ಷಿಸುತ್ತಿದ್ದರೆ ನನಗಂತೂ 20:20 ಮ್ಯಾಚಿನಷ್ಟೆ ರೋಮಾಂಚನಕಾರಿ ಅನುಭವವಾಗುತ್ತಿತ್ತು. ಒಂದೊಂದು ಪ್ರಶಸ್ತಿ ಬರುತ್ತಿದ್ದಂತೆ ಎದೆ ಹುಬ್ಬಿಸಿ ನಡೆಯಬೇಕೆನಿಸುತ್ತಿತ್ತು. ಒಟ್ಟಾರೆ ಈ ಚಿತ್ರಕ್ಕೆ 8 ಪ್ರಶಸ್ತಿಗಳು ಬಂದೇ ಬಿಟ್ಟಿತು. ಅದರಲ್ಲಿಯೂ ಎ.ಆರ್. ರೆಹಮಾನ್ಗೆ ಬಂದದ್ದ ಬಹುಶಃ ಭಾರತೀಯರಿಗೆೆ ಸ್ವಪ್ನಸಾದೃಶ್ಯವೆನಿಸುತ್ತಿತ್ತು.

ನಾವು ಯಾವುದೇ ಏನೇ ಕೇಳಿದರೂ ಎರಡನೆಯದನ್ನು ಕೇಳಿಯೇ ತೀರುತ್ತೇವೆ. ಹಾಗೆಯೇ ಕೆಲವು ಭಾರತೀಯರಲ್ಲಿ ಸ್ಲಂಡಾಗ್ ಪ್ರಶಸ್ತಿ ತಂದಿದ್ದಕ್ಕೆ ದ್ವಿಮುಖ ಅಭಿಪ್ರಾಯಕ್ಕೆ ಕಾರಣವಾಗಿದೆ. ಕೆಲವು ಜನರು ಹೇಳುವಂತೆ ಈ ಪ್ರಶಸ್ತಿಗಳು ಬಂದಿರುವುದು ಕೇವಲ ಭಾರತೀಯನಲ್ಲದವರು ನಿಮರ್ಿಸಿರುವುದಕ್ಕೆ ಎನ್ನುವವರು ಕೆಲವರಾದರೆ, ಮತ್ತೆ ಕೆಲವರು ಭಾರತೀಯರಲ್ಲವರು ಮಾಡಿದರೇ ರೆಹಮಾನ್ನಂತಹ ಭಾರತೀಯನಿಗೆ ಬಂದುದಕ್ಕೆ ಖುಷಿಪಡಿ ಎನ್ನುವವರು ಕೆಲವರು. ಇನ್ನೊಂದು ಸಾಧ್ಯತೆ ಎಂದರೆ ಒಮ್ಮೆ ಈ ಚಿತ್ರ ಆಸ್ಕರ್ನಲ್ಲಿ ಸೋತ್ತಿದ್ದರೆ ಆಗಲೂ ಎರಡ ಅಭಿಪ್ರಾಯಗಳು ಹುಟ್ಟಿತ್ತಿದವು. ಒಂದು ಭಾರತೀಯರ ಕತೆಯಾಗಿದ್ದರಿಂದ ಕೊಡಲಿಲ್ಲ, ಎಂಬುದು ಒಂದಾದರೆ, ಆಸ್ಕರ್ ಪಡೆಯುವಂತೆ ಚಿತ್ರಬರಲಿಲ್ಲವೆನ್ನುವವರು ಕೆಲವರು. ಅದೇನೇ ಇರಲಿ ಈಗಂತೂ ಪ್ರಶಸ್ತಿಗಳು ಬಂದಿವೆ. ಅದೂ ಒಂದಲ್ಲ ಎರಡಲ್ಲ ಎಂಟು. ಚಿತ್ರನಿಮರ್ಾಣ ಯಾರೇ ಮಾಡಿರಲಿ ಅಲ್ಲಿ ಚಿತ್ರದ ಆತ್ಮ ಕಥೆ ಮಾತ್ರ ಭಾರತೀರದ್ದು ಎಂಬುದು ಮಾತ್ರ ನಿಜ ಭಾರತೀಯ ಕಥೆಗಳಿಗೆ ಆಸ್ಕರ್ ಮಟ್ಟಕ್ಕೆ ತಾಕತ್ತಿದೆ ಎಂಬುದು ಈಗಾಗಲೇ ಸಾಕಷ್ಟು ಸಾರಿ ನಿರೂಪಿಸಿದೆ. ಆದರೆ ಈ ಬಾರಿ ಮಾತ್ರ ಸಂಗೀತದ ಶಕ್ತಿಗೆ ಇಡೀ ವಿಶ್ವವೇ ತಲೆಬಾಗಿರುವುದು ಮಾತ್ರ ಸುಳ್ಳಲ್ಲ.
ಕೊನೆಯದಾಗಿ ಹೇಳಲೇಬೇಕಾದ ಮಾತು ಒಂದಿದೆ, ಸ್ಮೈಲ್ ಪಿಂಕಿ ಡಾಕ್ಯೂಮೆಂಟ್ರಿಗೂ ಪ್ರಶಸ್ತಿ ಬಂದಿರುವುದು ಅಭಿನಂದನಾರ್ಹ
24.02.09

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s