ಸುಜಲ

Posted: February 22, 2009 in ಹೊಸತು

22.02.09
ದೇವಸ್ತಾನದ ಗರ್ಭಗುಡಿದ ಸರಿ ಹಿಂದೆಕ್ಕೆ ಒಬ್ಬ ಕುಡುಕ ರಂಗಪ್ಪ ಕುಳಿತ್ತಿದ್ದ ಜನ ಅವನನ್ನು ಜನ ನೋಡಿ ಸಕತ್ತಾಗಿ ಕುಡಿದ್ದಾನೆ. ಒಳ್ಳೆ ಹುಚ್ಚನ ರೀತಿ ಒಬ್ಬಬ್ಬನೇ ಮಾತಾಡ್ತನೆ’ ಎಂದು ಜನ ಮಾತಾಡಿಕೊಳ್ಳುತ್ತಿದ್ದರು ಕೆಲವರು ಅವನನ್ನು ಈ ದೇವಸ್ತಾನದ ಮಹಾನ್ ಧರ್ಮದಶರ್ಿ ಅಂತಲೂ ಅಂದುಕೊಳ್ಳುತ್ತಿದ್ದರು ಆದರೆ ಅವನ ಮನೆಯವರಿಗೆ ಮಾತ್ರ ಅವನು ಬೇಡವಾದ ಪದಾರ್ಥವಾಗಿದ್ದ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹೋಗಿ ಮಾರಿ ಬಿಡುತ್ತಿದ್ದ. ನಂತರ ಅಷ್ಟೇ ನಿಯತ್ತಿನಿಂದ ಕುಡಿತಕ್ಕೆ ಕಾರಣವನ್ನೂ ಹೇಳಿಕೊಳ್ಳುತ್ತಿದ್ದ ಇದರಿಂದಾಗಿ ಮನೆಯವರು ಇವನ ಕೈಗೆ ಯಾವುದೇ ಬೆಲೆಬಾಳುವ ವಸ್ತುವನ್ನು ಸಿಗುವಂತೆ ಇಡುತ್ತಿರಲಿಲ್ಲ. ಅದರೂ ಅವನು ಕುಡಿದ ಬರುವುದು ಮಾತ್ರ ನಿಲ್ಲಿಸಿರಲಿಲ್ಲ ಹಾಗೂ ಅದಕ್ಕೆ ಕಾರಣವನನ್ನೂ ಸಹ.
ಹೀಗೆ ಒಂದು ದಿನ ದೇವಸ್ತಾನ ಜೀಣರ್ೋದ್ಧಾರಕ್ಕೆ ಒಂದು ಸಭೆಯನ್ನೂ ಸಹ ಕರೆಯಲಾಗಿತ್ತು. ಅಲ್ಲಿಗೆ ಊರಿನ ಸಾಕಷ್ಟು ಮಂದಿ ಹಿರಿಯರು ದಾನಿಗಳಿ ಧನಿಗಳು ಬಂದಿದ್ದರು. ಅವರೆಲ್ಲಾ ತಾವು ಮಾಡಬಹುದಾದ ಕೆಲಸಗಳ ಉಸ್ತುವಾರಿಕೆಯನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲೇ ಇದ್ದ ಕರೆಯದೇ ಬಂದ ಅತಿಥಿ ರಂಗಪ್ಪ ಆ ಸಭೆಯನ್ನು ಸೇರಿಕೊಂಡ. ಮಾತಿನ ಮಧ್ಯದಲ್ಲಿ ದೇವಸ್ತಾನದ ಗರ್ಭಗುಡಿ ಸಾಕಷ್ಟು ಚಿಕ್ಕದಾಗಿ ಅದನ್ನು ಮತ್ತಷ್ಟು ದೊಡ್ಡದಾಗಿ ವಿಸ್ತಾರ ಮಾಡಬೇಕಿರುವುದಾಗಿ ಅಲ್ಲಿನ ಮುಖ್ಯ ಅರ್ಚಕರ ಹೇಳಿದರು. ಅರೆ ಈಗ ಇರುವ ಜಾಗವೇ ಸಾಕಷ್ಟು ಸಣ್ಣದಾಗಿದೆ ದೊಡ್ಡದು ಮಾಡಲು ಜಾಗವೆಲ್ಲಿದೆ ಎಂದ ರಂಗಪ್ಪ. ಈ ಕುಡುಕನ ಮಾತಿಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ, ಮೂರು ಹೊತ್ತು ಕುಡಿದು ಬಂದು ದೇವಸ್ತಾನದ ಹಿಂದೆ ಬಿದ್ದಿರ್ತಾನೆ ಎಂದರು ಅಲ್ಲಿನ ಒಬ್ಬರು. ಅದು ಹೇಗಾಗುತ್ತೇ ನಾನು ದಿನಾ ಅಲ್ಲಿಗೆ ಬರುವುದೇ ಸ್ವಾಮಿಗಾಗಿ ಅವನು ಕರೆದ ನಾನು ಬಂದೆ ಎಂದ ರಂಗಪ್ಪ. ಆಹಾ, ಓತಿಕ್ಯಾತನಿಗೆ ಬೇಲಿ ಸಾಕ್ಷಿ, ಯಾರು ಆ ನಿನ್ನ ಸ್ವಾಮಿ ಕರೆದವನು? ಎಂದರು ಅಲ್ಲಿನವರು. ನಿಮಗೆ ತಿಳಿಯದೇ ಇರುವುದೇನಿದೆ ಸ್ವಾಮಿ ಆ ನನ್ನ ಸ್ವಾಮಿ ವೆಂಕಟ ರಮಣ ಅವನೇ ಕರೆದ್ದದ್ದು. ಆಹಾ, ಇಷ್ಟು ವರ್ಷ ಪೂಜೆ ಮಾಡಿಕೊಂಡು ಬಂದಿರುವ ನಮಗೆ, ನಮ್ಮ ಮನೆತನಕ್ಕೆ ಕಾಣದವನು ನಿನಗೆ ಬಾ ಅಂದನಾ ಎಂದರು ಅರ್ಚಕರು. ಅದೇನೋ ನನಗೆ ತಿಳಿಯದು ಸ್ವಾಮಿ, ನನ್ನ ದಿನಾಲು ಕರೆದು ಒಂದು ಆಟ ಆಡನಾ ಅಂತನಾ ಇಬ್ಬರೂ ಆಡ್ತೀವಿ, ನಂತರ ಒಂದೊಂದು ತಲೆಮಟ್ಟೆ ಹಾಕಿಕೊಂಡು ಕುಡಿತೀವಿ, ದಿನಾ ನಾನು ಏನಾದರೂ ನೆಂಚಿಕೆಗೆ ತಂದರೆ ಆತ ಮಾತ್ರ ಕುಡಿಯಲು ಕೊಡತ್ತಾನೆ, ನಾನೂ ಒಂದೊಂದು ದಿನ ಕುಡಿಯಲು ತರುತ್ತೇನೆ ಅಂದು ಮಾತ್ರ ಅವನು ಬರಲಾರ ಎಂದ ರಂಗಪ್ಪ. ಅರ್ಚಕನ ಮುಖ ಸ್ವಲ್ಪ ಬಿಗಿಯಿತು. ಕೆಲವು ಧನಿಗಳು ಇರಲಿ ಬಿಡಿ ಅವನ ಮಾತನ್ನು ಎಕೆ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೀರಿ ಆಗುವ ಕೆಲಸದ ಕಡೆಗೆ ಗಮನ ಕೊಡಿ ಎಂದು ಅಂದಿನ ಕಲಾಪವನ್ನು ಮುಗಿಸಿಕೊಂಡು ಹೊರಟರು.
* * *
ಬೆಳಗ್ಗೆ ಎದ್ದು ದೇವಸ್ತಾನದ ಕಸ ಹೊಡೆಯುತ್ತಿದ್ದ ಕರಿಯಪ್ಪನಿಗೆ ದಿನಾ ಒಂದೊಂದು ಬಾಟಲಿ ದೇವಸ್ತಾನದ ಆವರಣದಲ್ಲಿ ಸಿಗುತ್ತಿತ್ತು. ಅದರ ಬಗ್ಗೆ ತಲೆಕೆಡಿಕೊಳ್ಳದ ಕರಿಯಪ್ಪ ಪಾಪಂಪಪ್ಪಿಗೆ ಕೊಟ್ಟು ಕಡ್ಲೆ ಮಿಠಾಯಿ ತಿನ್ನುತ್ತಿದ್ದ. ರಂಗಪ್ಪ ದಿನಾಲೂ ದೇವಸ್ತಾನ ಹಿಂಬದಿಯಲ್ಲಿ ಕುಡಿಯುತ್ತಿದ್ದದ್ದು ಅವನಿಗೆ ತಿಳಿದೇ ಇತ್ತು.
* * *
ಅರ್ಚಕ ಪ್ರತಿದಿನ ಬರುವ ಭಕ್ತಾದಿಗಳಿಗೆ ಮಾಡಿಕೊಡುವ ಪೂಜೆ ಪ್ರಸಾದ ನೇವೇದ್ಯ, ಮಂಗಳಾರತಿ, ಕುಂಕುಮಾಚನೆಯಿಂದಾಗಿ ಸಂಜೆಹೊತ್ತಿಗೆ ಸಾಕಷ್ಟು ಸುಸ್ತಾಗಿ ಬಿಡುತ್ತಿದ್ದ. ಮನೆಗೆ ಹೋಗುವಾಗ ಸಾಕಷ್ಟು ತೀರ್ಥಪ್ರಸಾದಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಮನೆಯಲ್ಲಿ ಅವನ ಹೆಂಡತಿ ಅವನ ಜೊತೆಗೆ ಸರಿಯಾಗಿ ಸಹಕರಿಸುತ್ತಿಲ್ಲವೆನುವುದು ಊರಿನ ಸುದ್ದಿ. ದೇವರಂಥ ಅರ್ಚಕರಿಗೆ ಹೀಗಾಗ ಬಾರದಿತ್ತು ಎಂಬುದು ಊರ ಜನರ ವಿಷಾದ. ಇರಲಿ ಹೀಗೆ ಅಚ್ಕರು ಊರಾಚೆಯಲ್ಲಿ ಕೊಳಗೇರಿಯಲ್ಲಿ ಶುದ್ಧಿ ಕರ್ಮದಲ್ಲಿ ಹೆಚ್ಚು ಕಾರ್ಯಪ್ರೌವೃತ್ತವಾಗಿರುವುದು ಮತ್ತೊಂದು ಸುದ್ದಿ. ಇದೂ ಜನರ ಅಭಿಮಾನಕ್ಕೆ ಒಂದು ಗರಿ. ಆಗಾಗ್ಗೆ ಸಿಟಿಯಿಂದ ಬಾರ್ ಮಾಲೀಕ ಬ್ರಹ್ಮಾನಂದ ಪೋನ್ ಮಾಡಿ ಕರೆಸಿಕೊಳ್ಳುತ್ತಿದ್ದು ಉಂಟು. ಬರುವಾಗ ಸಾಕಷ್ಟು ತೀರ್ಥ ಪ್ರಸಾದ ಸಮೇತರಾಗಿ ಬರುತ್ತಿದ್ದದ್ದು ಉಂಟು.
* * *
ಈ ದೇವಸ್ತಾನಕ್ಕೆ ತನ್ನದೇ ಆದ ಇತಿಹಾಸವಿದೆ ಈ ಊರಿನಲ್ಲಿ ಸಾಕಷ್ಟು ಜನರಿಲ್ಲದ ಕಾಲದಲ್ಲಿ ಊರಿಗೊಂದು ದೆವಸ್ತಾನ ಬೇಕೆಂದು ಆ ದೇವಸ್ತಾನಕ್ಕೊಂದು ಅರ್ಚಕರು ಬೇಕೆಂದು ಕೇಳಿ ಬ್ರಿಟೀಷ್ ದೊರೆಗಳಿಂದ ಅನುಮತಿ ಪಡೆದು ಪ್ರ್ರಾರಂಭಿಸಿದ ಹೆಗ್ಗಳಿಕೆ ಇದಕ್ಕಿದೆ. ಹೀಗಿರುವ ಅರ್ಚಕರ ತಾತ ಇಲ್ಲಿಯ ಮೊದಲ ಪೂಜಾರಿ. ನಂತರ ಅವರ ಮಗ ನಂತರ ಇವರು ಮುಂದೆ ಇವರ ಮಗ. ಇಲ್ಲಿ ತಲೆತಲಾಂತರದಿಂದ ದೇವರಿಗೂ ಇವರ ಮನೆಯವರಿಗೂ ಅವಿನೋಭಾವ ಸಂಬಂಧ, ಈಗಿರುವ ಅರ್ಚಕರ ತಾತನ ತಾತ ದೇವೇಂದ್ರನ ಸಭೆಗೆ ದಾರಾಳವಾಗಿ ಹೋಗಿ ಬರುತ್ತಿದ್ದ ಮಹಾತ್ಮರು ಎಂಬುದು ಐತಿಹ್ಯ. ಆದರೆ ಮುಂದಿನ ಪೀಳಿಗೆ ಅಷ್ಟು ಹೆಸರು ಪಡೆಯಲಿಲ್ಲ. ಕಾರಣ ಹಲವು ಇವೆ. ಅದನೆಲ್ಲಾ ಬಿಡಿ. ಒಂದು ಕಾಲದಲ್ಲಿ ದೇಶದಲ್ಲಿ ಬರಗಾಲ ಬಂದಿತ್ತು ಅಂತಹ ಸಂದರ್ಭದಲ್ಲಿ ದೇವರು ನೇಮ ನಿಷ್ಠೆ ಯಾವುದು ಸಕಾಲದಲ್ಲಿ ನಡೆಯುತ್ತಿರಲಿಲ್ಲ. ಜನರು ದೇವಸ್ತಾನದ ಕಡೆಗೂ ಮಲಗುತ್ತಿರಲಿಲ್ಲ. ತಮ್ಮ ಹೊಟ್ಟೆ ಹೊರೆದುಕೊಂಡರೆ ಸಾಕಾಗಿತ್ತು.
ಇಂತಹ ಭೀಕರ ಬರಗಾಲವನ್ನು ದಾಟಿಕೊಂಡು ಬಂದ ನಂತರ ಜನರು ನಿಧಾನವಾಗಿ ದೇವರು ದೇವಸ್ತಾನ ಪೂಜೆ ಪ್ರಾರಂಭವಾದವು ಆದರೆ ಅರ್ಚಕರ ವರಮಾನ ಮಾತ್ರ ಸುಧಾರಣೆಯಾಗಿರಲಿಲ್ಲ. ಭಕ್ತಾದಿಗಳ ಸಂಖ್ಯೆ ಕೂಡಾ ಹೆಚ್ಚಾಗಿರಲಿಲ್ಲಿ. ಭಕ್ತಾಧಿಗಳಿಲ್ಲದೇ ವರಮಾನವೂ ಇಲ್ಲ ಅರ್ಥಶಾಸ್ತ್ರದ ಪ್ರಕಾರ. ಅರ್ಚಕರು ದೇವರನ್ನೇ ಈ ಪ್ರಶ್ನೆಗೆ ಉತ್ತರ ಹೇಳಲು ಒತ್ತಾಯಿಸಿದರು. ಸೂದೀರ್ಘ ತಪಸ್ಸು ನಡೆಸಿದರು ಮನೆ ಮಠಗಳನ್ನು ಬಿಟ್ಟು ದ್ಯಾನಕ್ಕೆ ಕುಳಿತರು. ಒಂದು ಕದ್ದಿಂಗಳ ದಿನ ಅರ್ಚಕರಿಗೆ ಜ್ಞಾನೋದಯವಾಯಿತು. ಮರುದಿನವೇ ಅದೆಲ್ಲಿಗೋ ಹೋಗಿ ಬಂದರು. ದೇವರಿಗೆ ವಿಶೇಷ ಪೂಜೆ ಮಾಡಿದರು ಊರಿನ ಜನರಿಗೆಲ್ಲಾ ಡಂಗೂರ ಹೊಡೆಸಿ ದೇವರ ಪೂಜೆಗೆ ಕರೆಸಿ ಉಚಿತವಾಗಿ ತೀರ್ಥಪ್ರಸಾದಗಳನ್ನು ನೀಡಿದರು. ಊರಿನ ಜನರು ಹಿಂದೆಂದು ಕಾಣದಂತಹ ಸಂತೋಷದಲ್ಲಿ ಹಿಂದೆಂದೂ ನೋಡದಂತಹ ಭಕ್ತಿಯಲಿ ತೇಲಿದಂತಾಯಿತು. ದೇವರ ಕರುಣೆ ಅವನ ಆಶೀವರ್ಾದ ತಮಗೆ ಒಲಿದಿರುವುದಾಗಿ ಖುಷಿಪಟ್ಟರು. ತಮಗಾದ ಅನುಭವವನ್ನು ಸುತ್ತೇಳು ಹಳ್ಳಿಗೂ ಹಂಚ್ಚಿದರು. ಬೆಳಗಾಗುವುದರಲ್ಲಿ ದೇವಸ್ತಾನ ಸುತ್ತಮತ್ತಲಿನ ಊರಿನಲ್ಲೆ ವರ್ಡ ಪೇಮಸ್ ಆಗಿಹೋಯ್ತು. ಅನೇಕ ಕಡೆಗಳಿಂದ ಜನರ ಹೊಳೆಯೇ ಹರಿದು ಬಂದು. ಒಬ್ಬರಿಗೂ ಒಂದೊಂದು ರೀತಿಯ ತೀರ್ಥಪ್ರಸಾದ. ಅವರವರ ದಾನ ಧರ್ಮ ಹೆಸರಿನ ಮೇಲೆ ತೀರ್ಥಪ್ರಸಾದ ವಿನಯೋಗವಾಗುತ್ತಿತ್ತು. ದಿನವೆಲ್ಲಾ ಸಾಕಷ್ಟು ತೀರ್ಥಪ್ರಸಾದ ವಾದನಂತರ ತಾವು ಸ್ವಲ್ಪ ತೀರ್ಥಪ್ರಸಾದವನ್ನು ಸ್ವೀಕರಿಸಿ ದೇವರಿಗೆ ಕೊನೆಯ ಪೂಜೆಯನ್ನು ಮಾಡಿ, ದೇವರ ಕೊಂಡದಲ್ಲಿ ಉಳಿದ್ದಿದ್ದುನ್ನು ಸುರಿದು ಹೋಗುತ್ತಿದ್ದರು. ಇದು ನಿತ್ಯದ ಕಾಯಕವಾಗಿತ್ತು.
* * *
ಅನೇಕ ಜನರಿಗೆ ಮಕ್ಕಳಾಗಿದೆ, ಅನೇಕ ಜನರಿಗೆ ಸಿರಿಸಂಪತ್ತು ಬಂದಿದೆ. ಅನೇಕ ಜನರಿಗೆ ಮದುವೆಯಾಗಿದೆ, ಅನೇಕ ರೋಗಗಳೂ ಸಂಪೂರ್ಣ ಗುಣವಾಗಿದೆ ಇದೆಲ್ಲವೂ ಅರ್ಚಕರು ದೇವರನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿ ಕೊಟ್ಟ ತೀರ್ಥಪ್ರಸಾದವೇ ಕಾರಣ ಎಂಬುದು ಜನರ ನಂಬಿಕೆ. ಈಗ ದೇವಸ್ತಾನ ಆಸ್ತಿ ಹಣ ಸಾಕಷ್ಟು ಬೆಳೆದಿದೆ, ಅದಕ್ಕಾಗಿಯೇ ಒಂದು ಟ್ರಸ್ಟ್ ತೆಗೆಯಲಾಗಿದೆ. ತಿಂಗಳಿಗೆ ಮೂರು ವಿಶೇಷ ಪೂಜೆಗಳಿರುತ್ತವೆ. ವರ್ಷಕ್ಕೊಂದು ಜಾತ್ರೆ ಇರುತ್ತದೆ. ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ ಜನರು ಸರಿಯಾಗಿ ಸಂಚಾರ ಮಾಡಲಾಗದ ಸ್ಥಿತಿ ಇದೆ ಅದಕ್ಕಾಗಿ ಮುಂದಿನ ಜಾತ್ರೆ ನಡೆಯುವ ವೇಳೆಗೆ ದೇವಸ್ತಾನದ ಜೀಣರ್ೋದ್ಧಾರವಾಗಬೇಕಿದೆ. ತಾವು ಬನ್ನಿ ನಿಮ್ಮವರನ್ನು ಕರೆ ತನ್ನಿ ಎಂಬುದು ಪಾಂಪ್ಲೇಟ್ನ ಆಮಂತ್ರಣ.
ರಂಗಪ್ಪ ಈಗಲೂ ಅದೇ ದೇವಸ್ತಾನದ ಗರ್ಭಗುಡಿಯ ಹಿಂದೆಯೇ ಕಾಯುತ್ತಿರುತ್ತಾನೆ. ದೆವರು ಬಂದು ಅವನ ಜೊತೆಗೆ ಕುಡುಯುತ್ತಾನೆ. ಇವನು ಕುಡಿಸುತ್ತಾನೆ. ಇವನು ಕುಳಿತುಕೊಳ್ಳುವ ಸರಿ ಹಿಂಭಾಗದಲ್ಲಿ ದೇವರ ಕೊಂಡದ ನಾಳವಿದೆ. ಇದು ದೇವರು ಮತ್ತು ಇವನ ಮಧ್ಯೆಯಾವಾಗಲೂ ತೊಡಕಾಗಿರುತ್ತದೆ ಎಂಬುದು ರಂಗಪ್ಪನ ಮಾತು. ದೇವಸ್ತಾನದ ಜೀನರ್ೋದ್ಧಾವಾದರೆ ಇದೂ ಸರಿಯಾಗುವುದಾಗಿ ರಂಗಪ್ಪನ ಸಮಾಧಾನ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s